ಡಾ.ಬಿ.ಆರ್. ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ KAS, PSI, PDO, FDA, SDA, PC ಇತ್ಯಾದಿ ಹುದ್ದೆಗಳಿಗೆ ಉಚಿತ ತರಬೇತಿಗಾಗಿ ಸಂಪರ್ಕಿಸಿ - 9380678859

  ನಮ್ಮ ಈ ದೇಹ ಮತ್ತು ದೇಶ ಎರಡೂ ನಮ್ಮ ಹಿರಿಕರರು ಕಟ್ಟಿ , ಕೊಟ್ಟಿರುವ ಬೆವರು ಮತ್ತು ನೆತ್ತರ ಬಳವಳಿ, ತಮ್ಮ ಹಾಡಿ, ಕಾಡು,ಕೂಸುಗಳನ್ನು ಕಾಪಾಡಿಕೊಳ್ಳಲು ಮೂಲನಿವಾಸಿ ಬಹುಜನರಾದ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮೈನಾರಟಿ ಸಮುದಾಯಗಳು ಮಾಡಿದ ಕದನಗಳು, ಬಲಿದಾನಗಳು ಒಂದೆರಡಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಸಹಸ್ರಾರು ವರ್ಷಗಳಿಂದ ನಡೆಯುತ್ತಿದ್ದ ಅಮಾನವೀಯತೆಯನ್ನು ಅಂತ್ಯಗಳಿಸಲು ಸಂತರು ಉಣಬಡಿಸಿದ ಚಿಂತನಾ ಜೀವಾಮೃತ ಮತ್ತು ಅದಕ್ಕಾಗಿ ಅವರು ಅನುಭವಿಸಬೇಕಾಗಿ ಬಂದ ಯಾತನೆಗಳನ್ನು ಕಣ್ಣೀರಿಂದಲೂ ಬರೆಯಲು ಸಾಧ್ಯವಿಲ್ಲ.Read More...

ಸಮಸಮಾಜದ ಸ್ಥಾಪನೆ ದಲಿತ ವಿದ್ಯಾರ್ಥಿ ಪರಿಷತ್ತಿನ ಅಂತಿಮ ಗುರಿಯಾಗಿದೆ

  ಸಮಸಮಾಜದ ಸ್ಥಾಪನೆ ಅಷ್ಟು ಸುಲಭವಲ್ಲ ಅದೊಂದು ಸುದೀರ್ಘ ಸಂಘರ್ಷದ ಪಯಣ ಎಂಬ ಅರಿವು ವಿದ್ಯಾರ್ಥಿ ಪರಿಷತ್ತಿಗೆ ಇದೆ. ಅದಕ್ಕಾಗಿ ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ನಾವು ಮಾಡಬೇಕಿದೆ ಹಾಗೂ ಸಾಧಿಸಬೇಕಿದೆ. ನಮಗೆ ಅಂಬೇಡ್ಕರ್ ಮಾರ್ಗವೇ ಅಂತಿಮ.Read More...


ಗುರಿ ಸಾಧನೆಯ ಮಾರ್ಗ ಏನೂ ?

  ಮೇಲ್ಕಂಡ ಜನಸಿದ್ಧಾಂತಗಳು ಸತ್ಯ ಮತ್ತು ಸಮಾನತೆಯಲ್ಲಿ, ಪ್ರೀತಿ ಮತ್ತು ಪ್ರಾಮಾಣಿಕತೆಯಲ್ಲಿ ಅಚಲ ವಿಶ್ವಾಸವಿಡುವುದನ್ನು ನಮಗೆ ಈ ನೆಲದ ಕ್ರಾಂತಿಗಳು ಕಲಿಸಿವೆ. ಬದಲಾವಣೆ ಜಗದ ನಿಯಮ ಎಂಬುದನ್ನು ಮನವರಿಕೆ ಮಾಡಿಸಿವೆ, ಜನರೇ ಇತಿಹಾಸದ ನಿರ್ಮಾಪಕರು ಎಂಬುದನ್ನೂ ಹೇಳಿಕೊಟ್ಟಿವೆ. ಈ ದೇಶ ಇಂದು ದುಷ್ಟಕೂಟದ ಷಡ್ಯಂತ್ರಕ್ಕೆ ಬಲಿಯಾಗಿದ್ದರೂ ಅದರಿಂದ ಹೊರಬರುವ ಅದಮ್ಯ ಚೈತನ್ಯ ಈ ನೆಲದೊಳಗೆ ಅಂತರ್ಗತವಾಗಿದೆ. ಮೋಡಿಗೊಳಗಾಗಿರುವ ನಮ್ಮ ಜನಕ್ಕೆ ತಮಗಾದ ಮಹಾದ್ರೋಹದ ಅರಿವಾದಾಗ ಜಾಗೃತಿಯ ಹೊಸ ಉಬ್ಬರ ಈ ಶೊಷಿತ ಸಮಾಜಗಳ ಧ್ವನಿಯನ್ನು ಹೊಸ ಎತ್ತರಕ್ಕೆ ಒಯ್ಯಲಿದೆ.Read More...


ಶೋಷಿತ ವಿದ್ಯಾರ್ಥಿಗಳ ಆಂದೋಲನಕ್ಕೆ ಮುಂದಾಗೋಣ

  ವೈಚಾರಿಕ ಪ್ರಬುದ್ಧತೆಯ ವಿದ್ಯಾರ್ಥಿ ಯುವ ಜನತೆಯನ್ನು ಸಂಘಟಿಸುವ ಸ್ಥಳ ವಿಶ್ವಾವಿದ್ಯಾನಿಲಯಗಳಾಗಿವೆ.ವಿದ್ಯಾರ್ಥಿ ಯುವಜನರನ್ನು ಜಾಗೃತಗೊಳಿಸುವ, ಹಕ್ಕಿನ ಅರಿವು ಮೂಡಿಸುವ ಅವರಲ್ಲಿನ ಶಕ್ತಿಯನ್ನು ಅನಾವರಣಗೊಳಿಸುವ ಸಾಧನಗಳಾಗಿವೆ. ವಿವಿಧ ಶೋಷಿತ ವರ್ಗಗಳ, ದಮನಿತ ಸಮುದಾಯಗಳ ವಿದ್ಯಾರ್ಥಿ ಯುವಜನರನ್ನು ಅವರವರ ನ್ಯಾಯಬದ್ಧ ಹಕ್ಕುಗಳಿಗಾಗಿ ಒಗ್ಗೂಡಿಸಿ ವಿದ್ಯಾರ್ಥಿ ಯುವ ಆಂದೋಲನಗಳನ್ನು ಬಲಪಡಿಸೋಣ, ದಮನದ ವಿರುದ್ಧ ಸಿಡಿಯುವ ವಿದ್ಯಾರ್ಥಿ ಯುವಜನ ಹೋರಾಟಗಳನ್ನು ಕಟ್ಟೋಣ, ಪ್ರತ್ಯೇಕ – ಪ್ರತ್ಯೇಕ ಹೋರಾಟಗಳಿಂದಲೇ ಗುರಿಸಾಧನೆ ಸಾಧ್ಯವಿಲ್ಲ.Read More...


ದಲಿತ ವಿದ್ಯಾರ್ಥಿ ಪರಿಷತ್ತು ನಂಬಿಹ ಸಿದ್ಧಾಂತವೇನು ?

  ದಲಿತ ವಿದ್ಯಾರ್ಥಿ ಪರಿಷತ್ತು ಅಂಬೇಡ್ಕರವಾದ ಅಂತಿಮ ಮಾರ್ಗ ಎಂದು ಬಲವಾಗಿ ನಂಬಿದೆ. ಜಗತ್ತಿನ ಎಲ್ಲ ವಿದ್ಯಾರ್ಥಿ ಯುವಜನರ ಹಾಗೂ ಈ ನೆಲದಲ್ಲಿ ನಡೆದ ಎಲ್ಲಾ ಸಾಮಾಜಿಕ ಕ್ರಾಂತಿಗಳು DVP ಗೆ ಪ್ರೇರಣೆಗಳಾಗಿವೆ ಮತ್ತು ಸೈದ್ಧಾಂತಿಕ ಸಂಪನ್ಮೂಲಗಳಾಗಿವೆ. ಬ್ರಾಹ್ಮಣ್ಯ ಮತ್ತು ಬಂಡವಾಳವಾದ ಒಟ್ಟುಗೂಡಿ ದೇಶವನ್ನು ಆಪೋಷಣೆ ಮಾಡಿಕೊಂಡಿರುವ ಈ ಹೊತ್ತಿನಲ್ಲಿ ಬ್ರಾಹ್ಮಣ್ಯದ ಒಳಹೋರಣವನ್ನು ಬಿಚ್ಚಿಟ್ಟು ಅಂಬೇಡ್ಕರವಾದ ನಮ್ಮ ಓದಿಗೆ ವಿಶೇಷ ಒತ್ತು ನೀಡುತ್ತದೆ. ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ನಮ್ಮ ಪೂರ್ವಿಕರ ಸೈದ್ಧಾಂತಿಕ ನಿಲುವುಗಳನ್ನೂ ಮರುಹೊಂದಿಸಿಕೊಳ್ಳುತ್ತಾ ಗುರಿ ಸಾಧನೆಯತ್ತ ಸಾಗಬಯಸುತ್ತದೆ.Read More...