ಡಾ.ಬಿ.ಆರ್. ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ KAS, PSI, PDO, FDA, SDA, PC ಇತ್ಯಾದಿ ಹುದ್ದೆಗಳಿಗೆ ಉಚಿತ ತರಬೇತಿಗಾಗಿ ಸಂಪರ್ಕಿಸಿ - 9380678859

Who We Are ?


ಪ್ರೀಯ ವಿದ್ಯಾರ್ಥಿಮಿತ್ರರೇ,
  ಭಾರತದ ಇತಿಹಾಸವನ್ನು ಅಧ್ಯಯನ ಮಾಡಿ ನೋಡಿದರೆ. ನಮಗೆ ಒಂದು ಸ್ಪಷ್ಟವಾದ ವಿಚಾರ ತಿಳಿಯುತ್ತದೆ. ಯಾವ ರಾಜರೂ ದಲಿತರ, ಬಡವರ ಪರ ಸರಕಾರ ಮಾಡಿ ರಾಜ್ಯಭಾರ ಮಾಡಿರುವುದಿಲ್ಲ. ಬದಲಾಗಿ ತಮ್ಮ ಸ್ವಂತ ಬದುಕಿಗಾಗಿ ವೈಭವದ ಜೀವನಕ್ಕಾಗಿ ಶಕ್ತಿ, ಸಂಪತ್ತನ್ನು ವ್ಯಯ ಮಾಡಿರುವುದು ನಮಗೆ ಕಂಡು ಬರುತ್ತದೆ.
  ಆ ದಿನಗಳಲ್ಲಿಯೂ ಕೂಡಾ ಕೆಲವು ಬೆರಳೆಣಿಕೆಯಷ್ಟು ಜನ ರಾಜರು ಬಡವರ, ದಲಿತರ ಪರ ಆಳ್ವಿಕೆ ಮಾಡಿದ್ದಾರೆ. ಅವರ ಹೆಸರನ್ನು ಸಮಾಜ ಇನ್ನೂ ಮರೆತಿಲ್ಲ. ಅಂತಹ ವ್ಯಕ್ತಿಗಳನ್ನು ಮರೆಯುವ ಹಾಗೆಯೂ ಇಲ್ಲ. ಏಕೆಂದರೆ ಸುಮಾರು ವರ್ಷಗಳಿಂದ ದಲಿತ ಪರ ಹಲವಾರು ಸಂಘಟನೆಗಳು ಹುಟ್ಟಿಕೊಂಡಿವೆ. ಮತ್ತು ಸಮಾಜ ಮುಖಿಯಾಗಿ ಕೆಲಸ ಮಾಡಿವೆ. ಆದರೆ ತತ್ವ ಸಿದ್ಧಾಂತಗಳನ್ನು ಕ್ರಮೇಣ ಸಡಿಲಿಸಿ. ತಮ್ಮ ಘರ್ಜನೆಯ ಧ್ವನಿಯನ್ನು ಕಡಿಮೆ ಮಾಡಿವೆ. ಈಗ ದಲಿತರೆಂದರೆ, ಕೇವಲ ಪ್ರತಿಭಟನೆ ಮಾಡುವವರು ಎಂದು ಅಪ ಪ್ರಚಾರ ಮಾಡಲಾಗುತ್ತದೆ. ಇಂದಿನ ಬದಲಾದ ಸನ್ನಿವೇಶದಲ್ಲಿ ನಾವು ಕೂಡಾ ನಮ್ಮ ವಿಚಾರಧಾರೆ ಬದಲಾಯಿಸಿಕೊಂಡು ಮುಂದೆ ಸಾಗಬೇಕಾಗಿದೆ. ಅಂದರೆ ನಾವು ನಮ್ಮ ಸಂಘರ್ಷ ಬಿಡುವುದಲ್ಲ. ಬದಲಾಗಿ ನಮ್ಮ ಯುವಕರು ಇಂದು ನಡೆಯುತ್ತಿರುವ ದಾರಿ ಯಾವುದು ಎನ್ನುವುದನ್ನು ನಾವು ತಿಳಿದು ಅವರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುವುದು ಬಹಳ ಮುಖ್ಯವಾಗಿದೆ.
  ವಿಧ್ಯಾರ್ಥಿ, ಯುವಜನರಾದ ನಾವು ಇಂದು ಎಚ್ಚರವಾಗದಿದ್ದರೆ, ನಾವು ಕೋಮುವಾದಿ ಸಂಘಗಳ ಸದಸ್ಯರಾಗಿ ಹಾಳಾಗಬೇಕಾಗುತ್ತದೆ. ನಮ್ಮ ಹತ್ತಿರ ಹಲವಾರು ವಿದ್ಯಾರ್ಥಿ ಸಂಘಟನೆಗಳು ಬರುತ್ತವೆ. ಅವು ಯಾವು ಕೂಡ ನಮ್ಮ ಪರವಾಗಿ ಇಲ್ಲ ಬದಲಾಗಿ ಒಂದು ರಾಜಕೀಯ ಪಕ್ಷದ ವಿದ್ಯಾರ್ಥಿ ಘಟಕಗಳಾಗಿರುವುದು. ನಮ್ಮನ್ನು ಆ ಪಕ್ಷಕ್ಕೆ ಸೇರಿಸುವ ಸಲುವಾಗಿ ಡೊಂಗಿ ವಿದ್ಯಾರ್ಥಿ ಕಾಳಜಿಯನ್ನು ತೋರುತ್ತವೆ.
  ರೋಷ ದ್ವೇಷದ, ಕ್ರಾಂತಿಯ ಮಾತುಗಳನ್ನು ಹೇಳುತ್ತಾ, ನಮ್ಮ ಹತ್ತಿರ ಬಂದು ನಮ್ಮ ಸಮಾಜದ ಯುವಕರನ್ನು ತಮ್ಮತ್ತ ಸೆಳೆದು ನಮ್ಮ ಸಮುದಾಯದಿಂದ ಯಾವ ಒಬ್ಬ ವಿದ್ಯಾರ್ಥಿಯು ಒಳ್ಳೆಯ ಶಿಕ್ಷಣ ಪಡೆಯಲಿಕ್ಕೆ ಆಗದಂತೆ ತಡೆಯುತ್ತಿವೆ. ಇಂತಹ ವಿದ್ಯಾರ್ಥಿ ಸಂಘಟನೆಗಳು ಒಂದೇ ಗುರಿಯನ್ನು ಇಟ್ಟು ಕೊಂಡಿವೆ. ನಮ್ಮ ವಿದ್ಯಾರ್ಥಿಗಳನ್ನು ಮುಂದುವರಿಯಲಿಕ್ಕೆ ಬಿಡದಿರುವುದು ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವುದು. ಉದಾಹರಣೆಗೆ ಮೀಸಲಾತಿಯನ್ನು ವಿರೋದಿಸುವುದು ಖಾಸಗಿ ಕಾಲೇಜುಗಳಿಗೆ ಬೆಂಬಲಿಸುವುದು. ಸರಕಾರಿ ಶಾಲೆ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ದೊರೆಯದಂತೆ ಮಾಡುವುದು ಶಿಕ್ಷಣದ ಗುಣಮಟ್ಟ ಇಲ್ಲದಿರುವ ಹಾಗೆ ನೋಡಿಕೊಳ್ಳುವುದು.

    ದಲಿತ ವಿದ್ಯಾರ್ಥಿ ಪರಿಷತ್ತಿನ ಉದ್ದೇಶಗಳು

  • ▪️ ಬಹುಜನ ಸಮುದಾಯದ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
  • ▪️ ನಮ್ಮ ಹೆಣ್ಣು ಮಕ್ಕಳಿಗೆ ಸೂಕ್ತ ಸಲಹೆ ಮತ್ತು ಭದ್ರತೆ ಬಗ್ಗೆ ಅರಿವು ಮೂಡಿಸುವುದು.
  • ▪️ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಯಾವುದೇ ರೀತಿ ತೊಂದರೆಯಾಗದ ಹಾಗೆ ನೋಡಿಕೊಳ್ಳೂವುದು.
  • ▪️ ಸಾಮಾಜಿಕ ಕಾಳಜಿ ಹೊಂದುವ ಹಾಗೆ ಯುವಕ ಯುವತಿಯರಿಗೆ ತರಬೇತಿ ನೀಡುವುದು.
  • ▪️ ನಮ್ಮ ಸಮಾಜದ ಮಹಾಪುರುಷರ ಮತ್ತು ಹಿರಿಯರ ಆದರ್ಶ ಹಾಗೂ ತ್ಯಾಗ ಬಲಿದಾನಗಳನ್ನು ತಿಳಿಸಿ ಜಾಗೃತಿ ಮೂಡಿಸುವುದು.
  • ▪️ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸುವುದಕ್ಕೆ ಸರಕಾರದ ಮೇಲೆ ಒತ್ತಡ ಹೇರುವುದು.
  • ▪️ ನಮ್ಮ ಯುವಕ ಯುವತಿಯರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು.
  • ▪️ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವುದು.
  • ▪️ ಶಿಕ್ಷಣದಿಂದಲೇ ಸಮುದಾಯದ ಉದ್ದಾರ ಮತ್ತು ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಎನ್ನುವುದನ್ನು ಮನವರಿಕೆ ಮಾಡುವುದು.
  • ▪️ ದಲಿತ ಯುವಕರೆಲ್ಲರೂ ಸೇರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆ ಮಾರ್ಗದರ್ಶನ ನೀಡುವುದು.
  • ▪️ ದಲಿತ ಲೋಕದ ಹಿರಿಯ ಸಾಹಿತಿಗಳ, ಚಿಂತಕರ, ಬುದ್ದಿಜೀವಿಗಳ ವಿಚಾರವನ್ನು ನಮ್ಮ ವಿದ್ಯಾರ್ಥಿ ಮಿತ್ರರಿಗೆ ಪರಿಚಯಿಸುವುದು.
  • ▪️ ಸರಕಾರದ ಸಹಾಯ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡುವುದು.
  • ▪️ ವಿದ್ಯಾರ್ಥಿ ವಿದ್ಯಾರ್ಥಿನಿಯ ಹಕ್ಕುಗಳಿಗೆ ದಕ್ಕೆ ಬಂದಾಗ ಅದನ್ನು ಖಂಡಿಸಿ, ಅಂತಹ ವ್ಯಕ್ತಿ ಹಾಗೂ ಸಂಸ್ಥೆಗಳ ವಿರುದ್ದ ಹೋರಾಟ ಮಾಡುವುದು.
  • ▪️ ಸಮುದಾಯದ ವಿದ್ಯಾರ್ಥಿ, ಯುವಜನರಲ್ಲಿ ಸಮರ್ಥ ನಾಯಕತ್ವದ ಗುಣ ಬೆಳೆಸುವುದು.
  • ▪️ ನಾಟಕ, ಸಂಗೀತ, ಕ್ರಾಂತಿಗೀತೆಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸುವುದು.
  • ▪️ ಕಾಲಕಾಲಕ್ಕೆ ಸೂಕ್ತ ಸಂದರ್ಭದಲ್ಲಿ ಪರಿಷತ್ತಿನ ಜಾಗೃತಿ ಕರಪತ್ರಗಳನ್ನು ಹೊರಡಿಸುವುದು.
  • ▪️ ನಮ್ಮ ಯುವ ಜನತೆಯಲ್ಲಿ ಆತ್ಮ ಗೌರವ. ಉತ್ಸಾಹ, ಆಸಕ್ತಿ ಹೆಚ್ಚಿಸುವುದು.
  • ▪️ ನಿರೋದ್ಯೋಗ, ಅನಕ್ಷರತೆ, ಬಡತನ. ಮೂಡನಂಬಿಕೆ, ಭ್ರಷ್ಟಾಚಾರ, ಅಸ್ಪೃಶ್ಯತೆ, ಜೀವವಿರೋದಿ ಸಂಸ್ಕೃತಿಯ ಪ್ರಚಾರ ಮಾಡಿ, ಹಾನಿಕಾರಕ ದುಶ್ಚಟಗಳ ವಿರುದ್ಧ ನಮ್ಮ ವಿದ್ಯಾರ್ಥಿ ಯುವಜನರನ್ನು ಜಾಗೃತರಾಗುವಂತೆ ಮಾಡುವುದು.
  • ▪️ ಸಂವಾದ ಗೋಷ್ಠಿ, ಕವಿ ಗೋಷ್ಠಿ, ಯುವ ಜನ ಶಿಬಿರ ಹಮ್ಮಿಕೊಳ್ಳುವುದು.
  • ▪️ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿ ಪರಿಷತ್ತಿನ ವಿಚಾರ ಹರಡಿಸಿ ಜಾಗೃತಿ ಮೂಡಿಸುವುದು.
  • ▪️ ಬಹುಜನ ಸಮುದಾಯದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಪರಿಷತ್ತಿನ ಸದಸ್ಯರನ್ನಾಗಿ ನೊಂದಣಿ ಮಾಡಿಕೊಳ್ಳುವುದು.
  • ▪️ ಸಮುದಾಯ ಅಭಿವೃದ್ಧಿ ಶ್ರಮಿಸಿದ ಪ್ರಮುಖ ಮಹಾಪುರುಷರ ಮತ್ತು ನಾಯಕರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು.
  • ▪️ ಶೋಷಿತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನೆಲ್ಲಾ ಒಂದುಗೂಡಿಸುವುದು ಮತ್ತು ಅವರಲ್ಲಿ ಏಕತೆ ಬರುವ ಹಾಗೆ ನೋಡಿಕೊಳ್ಳುವುದು.
  • ▪️ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆ ಗ್ರಂಥಾಲಯವನ್ನು ನಿರ್ಮಿಸುವುದು.
  • ▪️ ಸಮುದಾಯದ ಜನರಿಗೆ ಸಂಕಷ್ಟಗಳು ಬಂದಾಗ (ಪ್ರವಾಹದಂತಹ) ಸ್ವಯಂ ಸೇವಕರಾಗಿ ಅವರ ನೋವಿನಲ್ಲಿ ಭಾಗಿಯಾಗುವಂತೆ ವಿದ್ಯಾರ್ಥಿ ಯುವಜನರಿಗೆ ಪ್ರೇರೆಪಿಸುವುದು.
  • ▪️ ಸರ್ಕಾರಗಳು ಸಮುದಾಯದ ಬಗ್ಗೆ ಹೊರಡಿಸುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು, ಅದರ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು.
  • ▪️ ಪ್ರಜಾಪ್ರಭುತ್ವವನ್ನು ಗೌರವಿಸುವ ಹಾಗೆ ತರಬೇತಿ ನೀಡುವುದು ಮತ್ತು ಸಂವಿಧಾನದ ಮಹತ್ವ ತಿಳಿಸುವುದು.
  • ▪️ ಮತದಾನದ ಬಗ್ಗೆ ವಿದ್ಯಾರ್ಥಿ ಯುವಜನರಲ್ಲಿ ಜಾಗೃತಿ ಮೂಡಿಸುವುದು.
  • ▪️ ಸಂವಿಧಾನ ಆಶಯಗಳನ್ನು ಯುವಕರಿಗೆ ತಿಳಿಸುವುದು.
  • ▪️ ವಿಶ್ವ ವಿದ್ಯಾಲಯಗಳಲ್ಲಿಯ ಶೈಕ್ಷಣಿಕ ನೀತಿಗಳ ಬಗ್ಗೆ ಅಧ್ಯಯನ ನಡೆಸುವುದು.
  • ▪️ ದಲಿತರಿಂದ ದಲಿತರ ಶೋಷಣೆ ಬಗ್ಗೆ ಜಾಗೃತಿ ಮೂಡಿಸುವುದು.
  • ▪️ ಸರ್ಕಾರಿ ಉದ್ಯೋಗ ಸೃಷ್ಟಿಯಾಗದಿರುವುದಕ್ಕೆ ಕಾರಣಗಳನ್ನು ಯುವ ಜನತೆಗೆ ತಿಳಿಸಿ ಹೋರಾಟ ರೂಪಿಸುವುದು.
  • ▪️ ವಿದ್ಯಾರ್ಥಿಗಳನ್ನು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ಮನೋಭಾವ ಬೆಳೆಸುವುದು.
  • ▪️ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಹಕ್ಕು ಕರ್ತವ್ಯಗಳ ಬಗ್ಗೆ ತಿಳುವಳಿಕೆ ನೀಡುವುದು.
  • ▪️ ವಸತಿ ನಿಲಯದಲ್ಲಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯಗಳನ್ನು ಮತ್ತು ಕಾಲಕಾಲಕ್ಕೆ ಬದಲಾದ ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ಭತ್ಯೆ, ಊಟದ ವೆಚ್ಚ ನಿಗಧಿಗಾಗಿ ಹೋರಾಟ ರೂಪಿಸುವುದು.
  • ▪️ ಕಾಲ ಕಾಲಕ್ಕೆ ಸರ್ಕಾರಗಳು ಸಮುದಾಯದ ಪರ ಮತ್ತು ವಿರೋಧ ನೇಮಿಸುವ ಆಯೋಗಗಳ ಬಗ್ಗೆ ತಿಳಿಸುವುದು.
  • ▪️ ವಿದ್ಯಾರ್ಥಿ ಯುವಜನರಿಗೆ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆ ಬಗ್ಗೆ ಕಾರ್ಯಾಗಾರ. ಏರ್ಪಡಿಸುವುದು.
  • ▪️ ಅಂತರ್ಜಾತೀಯ ವಿವಾಹಗಳ ಬಗ್ಗೆ ಜನ ಜಾಗೃತಿ ಮೂಡಿಸುವುದು.
  • ▪️ ಯುವ ಜನತೆಗೆ ಬದುಕಲು ಬೇಕಾದ ಉನ್ನತ ಉದಾತ್ತ ತತ್ವ ಮಾರ್ಗದರ್ಶನಗಳನ್ನು ತಿಳಿಸುವುದು.
  • ▪️ ದಲಿತ ಸಮುದಾಯದ ಹಿರಿಯ ಅಧಿಕಾರಿಗಳನ್ನು ನಮ್ಮ ಯುವಕರಿಗೆ ಪರಿಚಯಿಸುವುದು ಮತ್ತು ಮಾರ್ಗದರ್ಶನ ಕೊಡಿಸುವುದು.
  • ▪️ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸಗಳ ವೃತ್ತಿ ಪರಗಳ ಬಗ್ಗೆ ಮಾಹಿತಿ ಒದಗಿಸುವುದು. ಉದ್ಯೋಗ ಮಾಹಿತಿ. ನೀಡುವುದು.
  • ▪️ ಇಲ್ಲಿಯವರೆಗೆ ಮೀಸಲಾತಿಗೆ ಆದ ಸಾಧಕ/ಬಾದಕಗಳ ಬಗ್ಗೆ ಕಾರ್ಯಾಗಾರವನ್ನು ಏರ್ಪಡಿಸುವುದು. ಖಾಸಗಿ ವಲಯದಲ್ಲಿ ಮೀಸಲಾತಿ ಎಷ್ಟು ಅವಶ್ಯಕ ಎಂಬದರ ಬಗ್ಗೆ ಅರಿವು ಮೂಡಿಸುವುದು.
  • ▪️ ಯುವಕ ಯುವತಿಯರಲ್ಲಿ ಅಡಗಿರುವ ಪ್ರತಿಭೆಗಳಿಗಾಗಿ ಸೂಕ್ತ ವೇದಿಕೆ ನಿರ್ಮಿಸುವುದು ಮತ್ತು ಸನ್ಮಾನಿಸಿ ಪ್ರೋತ್ಸಾಹಿಸುವುದು.
  • ▪️ ಗ್ರಾಮ, ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಮ್ಮೇಳನ ಕಾರ್ಯಾಗಾರ ವಿಚಾರ ಸಂಕೀರ್ಣಗಳ ಮೂಲಕ ಸಮುದಾಯದ ವಿದ್ಯಾರ್ಥಿ ಯುವಜನರನ್ನು ರಾಷ್ಟ್ರವ್ಯಾಪಿ ಸಂಘಟಿಸುವುದು.
  • ▪️ ಸಮುದಾಯವು ವಿದ್ಯಾರ್ಥಿಗಳ ಮೇಲೆ ಯಾವ ರೀತಿ ಅವಲಂಬಿತವಾಗಿದೆ ಎನ್ನುವುದರ ಬಗ್ಗೆ ಅರಿವು ಮೂಡಿಸುವುದು.
  • ▪️ ಭೂಮಿ, ನೀರು, ಅರಣ್ಯ, ಗಣಿ ಇವುಗಳ ಹಂಚಿಕೆಯಲ್ಲಿ ಸಮುದಾಯಕ್ಕೆ ಆದ ಅನ್ಯಾಯವನ್ನು ಯುವ ಜನತೆಗೆ ಮನವರಿಕೆ ಮಾಡುವುದು.
  • ▪️ ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಪ್ರವೇಶ ಬಯಸುವ ಯುವಕ ಯುವತಿಯರಿಗೆ ತರಬೇತಿ ನೀಡಿ, ದಲಿತ ಮತ್ತು ದಲಿತಪರ ಇರುವ ಪಕ್ಷಗಳಿಗೆ ಸೇರಿ ಬದಲಾವಣೆ ಮಾಡುವಂತೆ ಪ್ರೇರಣೆ ನೀಡುವುದು ಮತ್ತು ಆ ಪಕ್ಷಗಳ ಪರಿಚಯ ಮಾಡಿಸುವುದು.
  • ▪️ ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬೇರು ಬಿಟ್ಟಿರುವ ಜಾತೀಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು.
  • ▪️ ಹತಾಶೆ, ನಿರಾಶೆ ಹೊಂದಿದ ವಿದ್ಯಾರ್ಥಿಗಳಿಗಾಗಿ ಸೂಕ್ತ ಸಮಾಲೋಚನೆ ನಡೆಸಿ ಮನ ಪರಿವರ್ತಿಸುವುದು.
  • ▪️ ಭಾರತ ದೇಶದ ಎಲ್ಲ ಜಾತಿ, ಮತ, ಪಂಥ, ಧರ್ಮಗಳ ಬಗ್ಗೆ ನಮ್ಮ ಯುವ ಜನತೆಗೆ ತಿಳುವಳಿಕೆ ನೀಡುವುದು.
  • ▪️ ದಲಿತರ ಪತ್ರಿಕೆಗಳ ಸಾಹಿತ್ಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು.
  ಈ ಎಲ್ಲಾ ಉದ್ದೇಶಗಳನ್ನು ನಿಮ್ಮ ದಲಿತ ವಿದ್ಯಾರ್ಥಿ ಪರಿಷತ್ ಹೊಂದಿದ್ದು, ಈ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕೆ ನಮ್ಮೊಂದಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ, ಯುವತಿಯರು ಕೈ ಜೋಡಿಸಬೇಕೆಂದು ಈ ಮೂಲಕ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಮೊ.ನಂ : 9380678859.