ಯಾವದೇ ಒಂದು ಚಳವಳಿ ಆರ್ಥಿಕ ನೆರವು ಇಲ್ಲದೇ ದೀರ್ಘ ಕಾಲ ನಡೆಯುವುದು ಕಷ್ಟ. ನಮ್ಮ ಚಳವಳಿ ಸ್ವಾಭಿಮಾನದ ಬದುಕಿನ ಚಳವಳಿಯಾಗಿದೆ. ಪರಿಷತ್ ಆರಂಭಿಸಿರುವ ಈ ಚಳವಳಿ ನಿರಂತರವಾಗಿ ನಡೆಯಲು ನಿಮ್ಮಿಂದ ಚಿಕ್ಕ ಆರ್ಥಿಕ ನೆರವು ನಾವು ಬಯಸುತ್ತೇವೆ. ನಿಮ್ಮ ಚಿಕ್ಕ ಆರ್ಥಿಕ ನೆರವು ದೊಡ್ಡ ಬದಲಾವಣೆಯನ್ನು ತರಬಹುದು. ಬಡ ದಲಿತ ವಿದ್ಯಾರ್ಥಿಗಳ ಸಬಲೀಕರಣ ಮತ್ತು ಶೈಕ್ಷಣಿಕ ಸಮಾನತೆಯನ್ನು ಉತ್ತೇಜಿಸುವ ನಮ್ಮ ಧ್ಯೇಯದಲ್ಲಿ ನಮ್ಮನ್ನು ಬೆಂಬಲಿಸಿ. ನಿಮ್ಮ ದೇಣಿಗೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಮತ್ತು ಸ್ಲಂ ಪ್ರದೇಶಗಳಲ್ಲಿ ಬಡ ಮಕ್ಕಳಿಗೆ ರಾತ್ರಿ ಶಾಲೆ ನಡೆಸಲು, ವಿದ್ಯಾರ್ಥಿವೇತನಗಳು, ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಸಮುದಾಯ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ.