ದಲಿತ ವಿದ್ಯಾರ್ಥಿ ಪರಿಷತ್ ಎಲ್ಲ ವರ್ಗಗಳ ವಿದ್ಯಾರ್ಥಿ ಹಾಗೂ ಯುವಜನರ ನಾಯಕತ್ವ ನೇತೃತ್ವದಲ್ಲಿ ಸುಮಾರು 20 ವರ್ಷಗಳಿಂದ ಮುನ್ನೆಡೆಯುತ್ತಿರುವ ಮತ್ತು ಸಮಾನತೆಗಾಗಿ ದುಡಿಯುತ್ತಿರುವ ಸಂಘಟನೆಯಾಗಿದೆ. ಈ 20 ವರ್ಷ ಸುದೀರ್ಘ ಅವಧಿಯಲ್ಲಿ ಪರಿಷತ್ ಹಲವು ಹೋರಾಟಗಳು ರೂಪಿಸಿದೆ, ಇದರ ಫಲವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ಆಗಿವೆ. ಹೋರಾಟದ ಜೊತೆಗೆ ಸಮುದಾಯಗಳ ಅಭಿವೃದ್ಧಿಗೆ ಅವಿರತ ಶ್ರಮಿಸಿ ತ್ಯಾಗ ಬಲಿದಾನಗೈದ ಮಹಾಪುರುಷ ಜಯಂತಿಗಳನ್ನು ವಿಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತ ಪರಿಷತ್ ಬರ್ತಾ ಇದೆ. ಮುಖ್ಯವಾಗಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ಜಯಂತಿಯಂದು ಅವರನ್ನು ನೆನೆಯುತ್ತ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ್ದಲ್ಲಿ ಮಹಿಳಾ ಸಾಧಕಿಯರಿಗೆ ಗೌರವಿಸಲು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತ್ತ ಬರುತ್ತಿದೆ. ಇನ್ನು ಸಂಪನ್ಮೂಲ ಕ್ರೂಡಿಕರಣ ಮಾಡಿ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜನೆ ಮಾಡ್ತಾ ಲಕ್ಷಾಂತರ ರೂಪಾಯಿ ಬಹುಮಾನವನ್ನು ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಪ್ರತಿಭಾವಂತ ವಿಜೇತರಿಗೆ ಸಂಪನ್ಮೂಲ ಲಭ್ಯತೆಯ ಆಧಾರದ ಮೇಲೆ ಹಂತ ಹಂತವಾಗಿ ಬಹುಮಾನ ನೀಡುತ್ತ ಬರಲಾಗುತ್ತಿದೆ. ಈ ರೀತಿಯ ವಿನೂತನ ಪರೀಕ್ಷೆಯು ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಓದಲು ಪ್ರೇರೇಪಿಸುವ ಉದ್ದೇಶಕ್ಕಾಗಿ ನಡೆಸಲಾಗುತ್ತಿದೆ ಹೊರತು ಯಾವುದೇ ರೀತಿಯ ಆರ್ಥಿಕ ನೆರವು ನೀಡುವ ನಮ್ಮ ಉದ್ದೇಶ ಹೊಂದಿರುವುದಿಲ್ಲ. ದೇಶದಲ್ಲಿ ಇದೊಂದು ಪ್ರಥಮ ಪ್ರಯತ್ನವಾಗಿದೆ. ರಾಜ್ಯ ಮಟ್ಟದ ಈ ಪರೀಕ್ಷೆಯನ್ನು ಏಕಕಾಲದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಾಡಿ ಪರಿಷತ್ ಯಶಸ್ವಿಯಾಗಿದೆ. ಈ ರೀತಿಯ ಪರೀಕ್ಷೆ ಮಾಡುತ್ತಿರುವ ರಾಜ್ಯದ ವಿಶೇಷ ಸಂಘಟನೆಯಾಗಿ ದಲಿತ ವಿದ್ಯಾರ್ಥಿ ಪರಿಷತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಪ್ರಮುಖ ಮಹಾಪುರುಷರ ಜಯಂತಿಯನ್ನು ರಾಜ್ಯ ಮಟ್ಟದ್ದಲ್ಲಿ ವಿನೂತನವಾಗಿ ಆಚರಣೆ ಮಾಡುವ ಉದ್ದೇಶವನ್ನು ಪರಿಷತ್ ಹೊಂದಿದೆ.